ಮುದ್ದೇಬಿಹಾಳ: ಮದರಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮದರಿಯಲ್ಲಿ 2000 ಮತ್ತು 2001 ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳಿಂದ ಕನ್ನಡ ರಾಜ್ಯೋತ್ಸವ ಮತ್ತು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದಂತಹ ಡಾ. ಗುರುಮೂರ್ತಿ ಕಣಕಾಲಮಠ ( ದೇವಿ ಆರಾಧಕರು) ಸಾ. ಲೋಟಗೇರಿ ಅಧ್ಯಕ್ಷತೆ ಶ್ರೀ ರಾಜು ಹಿರೇಮನಿ ಪ್ರಭಾರಿ ಮುಖ್ಯಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮದರಿ, ಜ್ಯೋತಿ ಬೆಳಗಿಸುವವರು ಶ್ರೀ ಸಿ. ಎಂ. ನಾಡಗೌಡರು ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು,ಸಸಿಗೆ ನೀರು ಉಣಿಸುವರು ಶ್ರೀ ಜಿ. ಬಿ.ಗುರಿಕಾರ ಅಧ್ಯಕ್ಷರು ಶಾಲಾ ಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮದರಿ,ಉಪನ್ಯಾಸಕರು ಶ್ರೀ ಎಸ್.ಎಸ್.ಹೂಗಾರ ಎಂ. ಜಿ.ವಿ.ಸಿ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಮುದ್ದೇಬಿಹಾಳ,ಗುರುವಂದನಾ ಸನ್ಮಾನಿತರು ಶ್ರೀಮತಿ ಜಿ.ಜಿ ತಿಗಳಿ ನಿವೃತ್ತ ಹಿರಿಯ ಮುಖ್ಯ ಗುರುಗಳು, ಶ್ರೀ ಜಿ. ಹೆಚ್. ಪಾಟೀಲ್ ನಿವೃತ್ತಿ ಮುಖ್ಯ ಗುರುಗಳು, ಶ್ರೀ ಬಿ. ಎಂ.ಗಬ್ಬರ ನಿವೃತ್ತ ಶಿಕ್ಷಕರು,ಶ್ರೀಎಸ್.ಎಸ್. ಕವಡಿಮಟ್ಟಿ ನಿವೃತ್ತಿ ಶಿಕ್ಷಕರು, ಶ್ರೀಮತಿ ಪಿ.ಬಿ. ಪ್ರಭಾಕರ ಸಹ ಶಿಕ್ಷಕಿಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲೋಡಗಿ, ಶ್ರೀ ಎಂ. ಎನ್. ಹೊಳಿ ಪ್ರಭರಿ ಮುಖ್ಯಗುರುಗಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಚುಗನೂರ, ಶ್ರೀಮತಿ ರೇಣುಕಾ ಹಡಪದ ನಿವೃತ್ತಿ ಅಂಗನವಾಡಿ ಶಿಕ್ಷಕಿಯರು ಈ ಗುರುಗಳಿಗೆಲ್ಲಾ ಸನ್ಮಾನಿಸಿ ಗೌರವಿಸಿ ಸ್ವಾಗತ ಕೋರಲಾಯಿತು.ಇನ್ನೋರ್ವ ವಿಶೇಷ ಸನ್ಮಾನಿತರು ಡಾ. ಶ್ರೀ ಪರಶುರಾಮ. ವಾಯ್. ವಡ್ಡರ MBBS,DCH,DNB ಚಿಕ್ಕ ಮಕ್ಕಳ ತಜ್ಞರು ಸಾರ್ವಜನಿಕ ಆಸ್ಪತ್ರೆ ಮುದ್ದೇಬಿಹಾಳ ಇವರಿಗೂ ಕೂಡಾ ಸನ್ಮಾನಿಸಿ ಗೌರವಿಸಿಲಾಯಿತು. ಈ ಕಾರ್ಯಕ್ರಮ ಮಾಡಲು ವಿದ್ಯಾರ್ಥಿಗಳು ಕನಸು ಇಟ್ಟುಕೊಂಡಿದ್ದರು. ಗುರುವಂದನಾ ಕಾರ್ಯಕ್ರಮ ಮಾಡಬೇಕಂತ ಎಲ್ಲಾ ಸ್ನೇಹಿತರು ಕೂಡಿಕೊಂಡು 2000 ಮತ್ತು 2001 ಒಂದನೇ ಸಾಲಿನ 7 ನೇ ವಿದ್ಯಾರ್ಥಿಗಳು ಕೂಡಿಕೊಂಡು ನಮಗೆ ಕಲಿಸಿದ ಗುರುಗಳಿಗೆ ಸನ್ಮಾನಿಸಿ ಗೌರವಿಸಿ ಗುರುಗಳಿಗೆ ವಂದನೆ ಸಲ್ಲಿಸಬೇಕೆಂದು ಎಲ್ಲಾ ವಿದ್ಯಾರ್ಥಿಗಳು ಕೂಡಿಕೊಂಡು ತೀರ್ಮಾನಿಸಿದರು. ನಾವು ಈಗ ಒಂದು ಹಂತದಲ್ಲಿ ಇದ್ದಿದ್ದೀವಿ ಅಂದರೆ ನಮಗೆ ಪಾಠ ಹೇಳಿ ಕೊಟ್ಟಂತಹ ಗುರುಗಳು ಕಾರಣ ಹಾಗಾಗಿ ವಿದ್ಯೆ ಕಲಿಸಿದ ಗುರುಗಳನ್ನು ಮರೆಯಬಾರದು ಅಂದುಕೊಂಡು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಈ ಕಾರ್ಯಕ್ರಮದಲ್ಲಿ ಮಾತನಾಡಿದವರು ಮದರಿ ಶಾಲೆಯಲ್ಲಿ ಕಲಿತಿರುವ ವಿದ್ಯಾರ್ಥಿ ಕೊಳ್ಳಪ್ಪ ಮದರಿ 7 ನೇಯ ತರಗತಿ ಓದುವಾಗ ಒಳ್ಳೆಯ ಶಿಸ್ತುಬದ್ಧವಾಗಿ ವಿನಯದಿಂದ ಇರುವ ಹಾಗೆ ಒಂದು ಒಳ್ಳೆಯ ಮಾರ್ಗದರ್ಶನ ಕೊಡುತ್ತಾ ನಮಗೆ ತಿದ್ದಿ ಬುದ್ದಿ ಹೇಳಿ ನಮಗೆ ಒಳ್ಳೆಯ ಶಿಕ್ಷಣ ಕೊಟ್ಟು ನಮಗೆ ಬೆಳೆಸಿದ್ದಾರೆ ಆ ಸಂಧರ್ಭದಲ್ಲಿ ಪಾಟೀಲ್ ಸರ್ ನಮಗೆ ತುಂಬಾ ಹೊಡೆಯುತ್ತಿದ್ದರು ಆಗ ನಮಗೆ ಅವರು ಹೊಡೆಯದೇ ಇದ್ದಿದ್ದರೆ ನಾವು ಒಂದು ಒಳ್ಳೆಯ ಸ್ಥಾನಕ್ಕೆ ಬರಲಿಕ್ಕೆ ಆಗ್ತಾ ಇರಲಿಲ್ಲ ಅದಕ್ಕೆ ಹಿರಿಯರು ಹೇಳುತ್ತಿದ್ದರು ಛಡಿ ಚಂ ಚಂ ವಿದ್ಯೆ ಗಮ್ ಗಮ್ ಅಂತ ಆಗಿನ ಕಾಲದಲ್ಲಿ ಶಿಕ್ಷಕರು ಒಡೆದು ಬಡಿದು ಬುದ್ಧಿ ಹೇಳುತ್ತಿದ್ದರು ಹಾಗಾಗಿ ನಾವು ಒಂದು ಒಳ್ಳೆಯ ದಾರಿಯಲ್ಲಿ ಇದ್ದೇವೆ ಈಗಿನ ಜನರೇಶನ್ ನಲ್ಲಿ ಮಕ್ಕಳಿಗೆ ಶಿಕ್ಷಕರು ಹೊಡಿವಂತಿಲ್ಲ ಬಡಿಯುವಂತಿಲ್ಲ ಹೀಗಾದರೆ ಒಳ್ಳೆಯ ದಾರಿ ಹಿಡಿಯುವುದು ಹೇಗೆ ಈಗಿನ ಜನರೇಶನ್ ತುಂಬಾ ಹಾಳಾಗಿದೆ ಅಂತ ಅವರ ಹಳೆಯ ನೆನಪುಗಳನ್ನು ಕೇಳಿಕೊಂಡರು ಮತ್ತು ಈ ಸಂದರ್ಭದಲ್ಲಿ ಮಾತನಾಡಿದವರು ಶ್ರೀ ಎಸ್.ಎಸ್. ಹೂಗಾರ್ ಸರ್ ಈ ದಿನ ನನಗೆ ತುಂಬಾ ಸಂತೋಷವಾಗುತ್ತಿದೆ ಯಾಕಂದರೆ ನನ್ನ ಕೈಯಲ್ಲಿ ಕಲಿತಂಥ ವಿದ್ಯಾರ್ಥಿಗಳು ಒಂದು ಉನ್ನತ ಮಟ್ಟದಲ್ಲಿ ಬೆಳೆದಿದ್ದಾರೆ ಅಂದರೆ ನನಗೆ ತುಂಬಾ ಸಂತೋಷವಾಗುತ್ತದೆ ಈಗ ನನ್ನ ವಿಚಾರದಲ್ಲಿ ಶಿಕ್ಷಕನೆಂದರೆ ಹೇಗಿರಬೇಕು ಎಂದರೆ ಎಲ್ಲಾ ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಓದು ಬರಹ ಕಲಿಸಿ ಅವರಿಗೆ ಒಂದು ಒಳ್ಳೆಯ ಮಾರ್ಗ ತೋರಿಸಬೇಕು ಅವಾಗ ಶಿಕ್ಷಕನಿಗೆ ಒಂದು ಒಳ್ಳೆಯ ಬೆಲೆ ಸಿಗುತ್ತದೆ ಅಂತ ಅವರ ಹಿತನುಡಿಗಳನ್ನು ಹೇಳಿದರು ಮತ್ತು ಶ್ರೀ. ಜಿ. ಹೆಚ್ ಪಾಟೀಲ್ ಸರ್ ಅವರು ಕೂಡ ಈ ಸಂದರ್ಭದಲ್ಲಿ ಮಾತನಾಡಿದರು ನಾ ಮದರಿ ಶಾಲೆಗೆ ಬರುವಾಗ ಆಲೂರಿನಿಂದ ಸೈಕಲ್ ಮೇಲೆ ಬರುತ್ತಿದ್ದೆ ನಾನು ಗೇಟಿಗೆ ಬಂದ ತಕ್ಷಣ ಬಿಲ್ ಮಾಡಿದರೆ ವಿದ್ಯಾರ್ಥಿಗಳು ಬಂದು ನನಗೆ ಒಂದು ತಂಬಿಗೆ ಕುಡಿಯುವುದಕ್ಕೆ ನೀರು ಕೊಟ್ಟು ಇನ್ನೊಬ್ಬ ವಿದ್ಯಾರ್ಥಿ ಸೈಕಲ್ ತೆಗೆದುಕೊಂಡು ಸೈಡಿಗೆ ನಿಲ್ಲಿಸುತ್ತಿದ್ದರು ಅವಾಗ ವಿದ್ಯಾರ್ಥಿಗಳಿಗೆ ನನ್ನ ಕಂಡರೆ ಭಯದಿಂದ ಓದುಬರಹ ಮಾಡುತ್ತಿದ್ದರು ಆ ಶಿಸ್ತು ಈಗ ಒಂದು ಒಳ್ಳೆಯ ಮಟ್ಟಕ್ಕೆ ತಂದು ನಿಲ್ಲಿಸಿದೆ ನನಗೀಗ ತುಂಬಾ ಸಂತೋಷವಾಗಿದೆ ನನ್ನನ್ನು ಮದರಿ ಗ್ರಾಮಕ್ಕೆ ಮರಳಿ ಕರೆದು ನನಗೆ ಸನ್ಮಾನಿಸಿ ಗೌರವಿಸಿದಕ್ಕೆ ತುಂಬಾ ಧನ್ಯವಾದಗಳು ಅಂತ ಹೇಳಿದರು ಈ ಸಂದರ್ಭದಲ್ಲಿ ಮದರಿ ಶಾಲೆಯಲ್ಲಿ ಕಲಿತಂತಹ ವಿದ್ಯಾರ್ಥಿ ಶಿವಕುಮಾರ ಕುಂಟೋಜಿ ಅವರು ಕೂಡ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರೂ ಮತ್ತು ಶ್ರೀಮತಿ ಜಿ. ಜಿ. ತಿಗಳಿ ನಿ, ಹಿರಿಯ ಮುಖ್ಯಗುರುಗಳು ಅವರು ಕೂಡ ತಮ್ಮ ಒಳ್ಳೆಯ ಅಭಿಪ್ರಾಯವನ್ನು ಹಂಚಿಕೊಂಡರು ಈ ಸಂದರ್ಭದಲ್ಲಿ ಇನ್ನು ಅನೇಕ ಶಿಕ್ಷಕರು ಮಾತನಾಡಿದರು ನವಂಬರ್ ಒಂದು ಕನ್ನಡ ರಾಜ್ಯೋತ್ಸವ ಮತ್ತು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಮದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ನಡೆಯಿತು ಈ ಕಾರ್ಯಕ್ರಮದಲ್ಲಿ ಮದರಿ ಗ್ರಾಮದ ಗುರುಹಿರಿಯರು ಎಲ್ಲಾ ಸಹೋದರ ಮತ್ತು ಸಹೋದರಿಯರು ಕೂಡಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಸಿ.ಎಂ. ನಾಡಗೌಡ,ಶರಣು ನಾಗುರ, ಶರೀಫ ನದಾಫ್, ಸಂಗಮೇಶ್ ಕುಂಬಾರ,ಬಸನಗೌಡ ಗೌಡರ, ಮಂಜುನಾಥ್ ಪಡದಾಳಿ, ಮುತ್ತು ವಡ್ಡರ, ಕೊಳಪ್ಪ ಮದರಿ,ಶರಣು ಗುರುಕಾರ, ದಿಶಾದಭಿ ನದಾಫ್, ಅಯ್ಯಮ್ಮ ಗೌಡರ, ಬಸವರಾಜ ಕಟ್ಟಿಮನಿ, ಗಂಗಾಧರ್ ಕನ್ನೊಳ್ಳಿ,ಶರಣು ವಡ್ಡರ,ಕವಿತಾ ತೊಂಡಿಹಾಳ, ಚಂದಪ್ಪ ಹುಗ್ಗಿ, ಕಿರಣ್ ನಾರಗಲ,ತಿಪ್ಪಣ್ಣ ರೂಡಗಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ವರದಿಗಾರರು ಬಸನಗೌಡ ಗೌಡರ( ಮದರಿ ) ಮುದ್ದೇಬಿಹಾಳ