ಸೀರಿಯಲ್ನಲ್ಲಿ ಅತ್ತೆ-ಅಳಿಯನಾಗಿ ನಟಿಸಿದ್ದ ಇಂದ್ರನೀಲ್ ಹಾಗೂ ಮೇಘನಾ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 20 ವರ್ಷಗಳ ದಾಂಪತ್ಯದಲ್ಲೂ ಮಕ್ಕಳಿಲ್ಲದ ಚಿಂತೆ ಕಾಡುತ್ತಿದೆ. ವಯಸ್ಸಾದ ಮೇಲೆ ಮಕ್ಕಳು ಬೇಡ ಎಂದಿದ್ದಾರೆ. ಇತ್ತೀಚೆಗೆ ಮದುವೆಯಾಗಿ 20 ವರ್ಷದ ಸಂಭ್ರಮ ಆಚರಿಸಿದ ಸೀರಿಯಲ್ ಕಲಾವಿದರಾದ ಇಂದ್ರನೀಲ್ ಹಾಗೂ ಮೇಘನಾ ಲವ್ ಸ್ಟೋರಿ ಸಖತ್ ಇಂಟ್ರಸ್ಟಿಂಗ್. ಜನಪ್ರಿಯ ಸೀರಿಯಲ್ವೊಂದರಲ್ಲಿ ಅತ್ತೆ-ಅಳಿಯನಾಗಿ ನಟಿಸಿದ್ದ ಈ ಜೋಡಿ ನಿಜ ಜೀವನದಲ್ಲಿ ಗಂಡ-ಹೆಂಡ್ತಿಯಾಗಿದ್ದಾರೆ. ಆದರೆ, ಮದುವೆಯಾಗಿ ಈ ಜೊಡಿಗೆ 20 ವರ್ಷವಾಗಿದ್ದರೂ ಮಕ್ಕಳಾಗಿಲ್ಲ ಅನ್ನೋ ಚಿಂತೆ ಇವರನ್ನು ಕಾಡಿದೆ. ತೆಲುಗುವಿನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ ಚಕ್ರವಾಕಂ ಸೀರಿಯಲ್ನಲ್ಲಿ ಇಂದ್ರನೀಲ್ ಅವರ ಅತ್ತೆಯ ಪಾತ್ರದಲ್ಲಿ ಮೇಘನಾ ರಾಮಿ ನಟಿಸಿದ್ದರು. ಚಕ್ರವಾಕಂ ಸೀರಿಯಲ್ ಎಷ್ಟು ಪ್ರಖ್ಯಾತವಾಗಿತ್ತೆಂದರೆ ಇದು ಪ್ರಸಾರವಾಗುವ ಹೊತ್ತಿಗೆ ಪ್ರೇಕ್ಷಕರು ಟಿವಿ ಮುಂದೆ ಕೂರುತ್ತಿದ್ದರು. ಸುಮಾರು ಕೆಲವು ವರ್ಷಗಳ ಕಾಲ ಓಡಿದ ಈ ಧಾರಾವಾಹಿಯ ಟಿಆರ್ಪಿಯೂ ಮೇಲ್ಮುಖವಾಗಿಯೇ ಇತ್ತು.
Chakravyuha News > Lifestyle > ಸೀರಿಯಲ್ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!