ಚಾಮರಾಜನಗರ ದಲ್ಲಿ ಇದೆ ತಿಂಗಳ ಮೊದಲನೆ ವಾರದಲ್ಲಿ ಮೂರನೇ ತರಗತಿ ಓದುತ್ತಿದ್ದ, ಹೆಣ್ಣು ಮಗು, ಇದ್ದಕಿದ್ದಂತೆ ಶಾಲೆಯಲ್ಲಿ ಮೂರ್ಛೆ ತಪ್ಪಿ ಬಿದ್ದಿದೆ. ಕೂಡಲೇ ಶಾಲೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಅಲ್ಲಿ ಪ್ರಾಣಬಿಟ್ಟಿದೆ. ಕಾರಣ ಹೃದಯಾಘಾತ.
ಇಷ್ಟು ಸಣ್ಣ ಮಗುವಿಗೆ ಯಾಕೆ ಹೃದಯಾಘಾತವಾಯಿತು ಎಂದು ಒಮ್ಮೆ ಯೋಚಿಸಿದ್ದೀರಾ?
ಕಾರಣ, ಇವತ್ತಿನ ಜೀವನ ಶೈಲಿ. ಪೋಷಕರು ಮಕ್ಕಳನ್ನ ಮುದ್ದ್ದು ಮಾಡುತ್ತಿದ್ದೇವೆ ಎಂಬ ಸ್ವಾರ್ಥಮಾನೋಭಾವದಿಂದ, ಕೇಳಿದ್ದನ್ನೆಲ್ಲ ಕೊಡಿಸಿ ತಿನ್ನಿಸುತ್ತಿರುವ ಕಾರಣ(Junk Foods). ನನ್ನ ಮಕ್ಕಳು ಚೆನ್ನಾಗಿರಬೇಕು ಎಂದು ಅಗತ್ಯಕ್ಕೂ ಮೀರಿ ತಿನ್ನಿಸುತ್ತಿರುವ ಕಾರಣ. ದೈಹಿಕವಾಗಿ ಕೆಲಸ ಮಾಡೋರು ಏನೇ ತಿನ್ನಲಿ ಒಂದು ಹಂತಕ್ಕೆ ಬೇಗ ಜೀರ್ಣಮಾಡಿಕೊಲ್ಲಬಹುದು. ಏನೂ ಕೆಲಸ ಮಾಡದೆ ಮನೆಯಲ್ಲೇ ಕೂತಿರುವ ಜನರು, ಜಾಸ್ತಿ ಅಡಿಗೆ ಎಣ್ಣೆ ಬಳಸಿ ನಾಗರಿಕತೆ ಎಂಬ ಹೆಸರಲ್ಲಿ ಬೆಳಗ್ಗಿನ ತಿಂಡಿ(Break fast) ತಿನ್ನುವುದು. ನಂತರ 11 ಗಂಟೆಗೆ ಮತ್ತೆ ಸ್ನಾಕ್ಸ್ ತಿನ್ನುವುದು. ಮತ್ತೆ ಮದ್ಯಾಹ್ನ ಊಟ, ಸಂಜೆ ಸ್ನಾಕ್ಸ್ ಮತ್ತೆ ರಾತ್ರಿ ಊಟ, ತಿನ್ನುವುದು ಅದೇ ದಿನಚರಿಯನ್ನ ಮಕ್ಕಳಿಗೂ ಕಲಿಸುವುದು. ಒಂದರ ಹಿಂದೆ ಮತ್ತೊಂದು ತಿನ್ನುವುದೇನೋ ಸರಿ ಆದರೆ ಅದು ಜೀರ್ಣವಾಗುವುದು ಹೇಗೆ ಎಂದು ಯೋಚಿಸಲ್ಲ. ಅದು ಅಜೀರ್ಣವಾಗಿ ಗ್ಯಾಸ್ಟ್ರಿಕ್, ಮಲಬದ್ಧತೆ ಮುಂತಾದ ಕಾಯಿಲೆಗಳಿಗೆ ತಿರುಗಿ ಕೊನೆಗೆ ಪ್ರಾಣಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
ಎರಡನೆಯದ್ದು, ಎಷ್ಟೋ ಕೃಷಿಕರ ಮನೆಗಳಲ್ಲಿ ಸಹ ಮಕ್ಕಳು ಇರುತ್ತಾರೆ, ಈ ನಾಗರಿಕರು ಅಂತೂ ನಾಗರಿಕತೆಯ ಹಿಂದೆ ಬಿದ್ದು ನಮ್ಮ ಪೂರ್ವಿಕರ ಆಹಾರಪದ್ಧತಿಯನ್ನು ಬದಲಾಯಿಸಿಬಿಟ್ಟಿದ್ದಾರೆ, ಸೋಮಾರಿಗಳಾಗಿದ್ದಾರೆ. ಆದರೆ ಕೃಷಿ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಬೆಳೆ ಬೆಳೆಯಬೇಕು ಎಂದು ಹೆಚ್ಚಿನ ಔಷದಿಗಳನ್ನು ಒಡೆದು ಅನಾರೋಗ್ಯಗಳಿಗೆ ಕಾರಣವಾಗುತ್ತಿದ್ದಾರೆ. ತಿಳಿ ಹೇಳಿದರೂ ಕೇಳದೆ ಇರುವ ಮಟ್ಟಕ್ಕೆ ಈ ಸಮಾಜ ಹಾಳಾಗುತ್ತಿದೆ.
ನಮ್ಮ ಶಾಲೆಯಲ್ಲೂ 4-5ವರುಷಗಳ ಹಿಂದೆ ಯಾವ ಮಕ್ಕಳು ಹೊಟ್ಟೆನೋವು, ಹೃದಯ ನೋವು, ತಲೆನೋವು, ತಲೆಸುತ್ತ, ಜ್ವರ, ಸೊಂಟನೋವು, ಮೊಣಕಾಲುನೋವು ಎಂದು ಹೇಳುತ್ತಿರಲಿಲ್ಲ. ಆದರೆ ಕಳೆದ ವರುಷದಿಂದ, ಪ್ರತೀ ದಿನ ಸುಮಾರು. 20-30 ಮಕ್ಕಳನ್ನು ಹುಷಾರಿಲ್ಲ ಅಂತ ಶಾಲೆಯಿಂದ ಮನೆಗೆ ಕಳುಹಿಸಿಕೊಡುತ್ತಿದ್ದೇವೆ. ಅವರನ್ನೆಲ್ಲ ಗಮನಿಸಿದಾಗ ನನಗೆ ಅರ್ಥ ಆಗಿದ್ದು ಶನಿವಾರ ಭಾನುವಾರ ಬಂದರೆ, ಸ್ಟೇಟಸ್ ನಲ್ಲಿ ಅವರ ಫೋಟೋಗಳು ಹಾಕಿಕೊಳ್ಳುವುದಿಕ್ಕೆ ಪಿಜ್ಜಾ, ಬರ್ಗರ್ ಹಾಗು ಹೆಚ್ಚಿನದ್ದಾಗಿ ಮಾಂಸ ಸೇವನೆ ಮಾಡಿರುವುದೇ ಕಾರಣ.
ಹಿಂದಿನಕಾಲದಲ್ಲಿ ಊಟಕ್ಕೆ ಬರ ಇತ್ತು, ಬಹುತೇಕ ಹೆಚ್ಚು ಜನರು ಒಟ್ಟಾಗಿ ಒಂದೇ ಕುಟುಂಬದಲ್ಲಿ ವಾಶಿಸುತ್ತಿದ್ದರು. ವ್ಯವಸಾಯ ಮಾಡುತ್ತಿದ್ದ ಕುಟುಂಬಗಳು ಕೆಲವು ತಿಂಗಳುಗಳಿಗೆ ಆಗುವಷ್ಟು ದವಸ ದಾನ್ಯಗಳನ್ನ ಶೇಖರಣೆ ಮಾಡಿಟ್ಟುಕೊಳ್ಳುತ್ತಿದ್ದರು. ಒಂದು ವರುಷದ ಕಾಲ ಎಲ್ಲರಿಗೂ ಉನ್ನಲು ಬೇಕಾಗಿರುವ ಎಲ್ಲಾ ತರಹದ ಪದಾರ್ಥಗಳನ್ನು ಯಾವುದೇ ರಸಾಯಣ ಬಳಸದೆ ಆರ್ಗಾನಿಕ್ ಆಗಿ ಬೆಳೆದುಕೊಳ್ಳುತ್ತಿದ್ದರು, ಹೆಚ್ಚು ಬೆಳೆ ಆಗದಿದ್ದರೂ ಮನೆಗೆ ಆಗುವ ಅಷ್ಟದರೂ ಬೆಳೆಯುತ್ತಿದ್ದರು. ಬರುವ ವರುಷದ ವರೆಗೂ ಹಿತಿ ಮಿತಿಯಲ್ಲಿ ಅಡಿಗೆ ಮಾಡಿ ತಿನ್ನುತ್ತಿದ್ದರು. ಆಗ ತಿನ್ನುವುದಕ್ಕಾಗಿ ಕೃಷಿ ಮಾಡುತ್ತಿದ್ದರು. ಈಗ ಹಣಕ್ಕಾಗಿ ರಸಗೊಬ್ಬರಗಳನ್ನ ಹೆಚ್ಚು ಬಳಸಿ ಕೃಷಿ ಮಾಡುತ್ತಿದ್ದಾರೆ ಹಣಕ್ಕಾಗಿ. ಹಣ ಇಲ್ಲದೇ ಇದ್ದರೆ ಅವರಿಗೆ ಮರ್ಯಾದೆ ನೀಡುವುದಿಲ್ಲ ಎಂಬ ಕಾರಣಕ್ಕಾಗಿ.
ಹಣ ಮಾಡುವ ಹಿಂದೆ ಬಿದ್ದು ಎಲ್ಲವನ್ನೂ ಸರ್ವನಾಶ ಮಾಡುತ್ತಿದ್ದಾರೆ ಜನ. ಈವತ್ತಿನ ದಿನಗಳಲ್ಲಿ ಬಹುತೇಕ ಜನರು ಅಂದುಕೊಳ್ಳುತ್ತಿದ್ದಾರೆ ರಾತ್ರಿ ಹಗಲು ದುಡಿಯುತ್ತಿರುವುದು, ಮೋಸ ವಂಚನೆ ಮಾಡಿ ದುಡಿಯುತ್ತಿರುವುದು, ದ್ವೇಷ ಅಸೂಯೆಗಳನ್ನು ಬೆಳಸಿಕೊಂಡು ದುಡಿಯುತ್ತಿರುವುದು, ಅಕ್ರಮ ಮಾಡಿ ದುಡಿಯುತ್ತಿರುವುದು ಅವರ ಮಕ್ಕಳಿಗಾಗಿ ಅಂತ.
ಆದರೆ, ನನ್ನ ಪ್ರಕಾರ ಇವತ್ತು 95% ಜನರು ಮಕ್ಕಳ ಭವಿಷ್ಯಕ್ಕಾಗಿ ಇಷ್ಟೆಲ್ಲಾ ಕಷ್ಟ ಪಡುತ್ತಿದ್ದಾರೆ ನಿಜ, ಆದರೆ, ನಿಜವಾದ ಮಕ್ಕಳ ಶತ್ರುಗಳು ಪೋಷಕರೇ ಅಂತ ಹೇಳಲು ವಿಷಾದ ವ್ಯಕ್ತಪಡಿಸುತ್ತೇನೆ. ಯಾಕೆ ಅಂತ ಹೇಳುವುದಾದರೆ.
ಮಕ್ಕಳಿಗೆ ಸಂಸ್ಕೃತಿ ಕಳುಹಿಸುತ್ತಿಲ್ಲ/ಅಹಂಕಾರವನ್ನು, ಸ್ವಾರ್ಥವನ್ನು ಕಳುಹಿಸುತ್ತಿದ್ದಾರೆ. ಆ ಸ್ವಾರ್ಥ ನಾಳೆದಿನ ತಂದೆ ತಾಯಿಯನ್ನೂ ನೋಡಿಕೊಳ್ಳುವುದಿಲ್ಲ.
ಮಕ್ಕಳಿಗೆ ಅವಮಾನಗಳನ್ನು ಎದುರಿಸಲು ಧೈರ್ಯ ತುಂಬುತ್ತಿಲ್ಲ. ಅವಮಾನ ಆಗಿದೆ ಅಂದಕೂಡಲೇ ಪೋಷಕರು ಗಲಾಟೆಗೆ ಹೋಗುತ್ತಿದ್ದಾರೆ. ಆದರೆ ಪೋಷಕರು ಇರುವವರೆಗೂ ಅವಮಾನವದಾಗೆಲ್ಲಾ ಗಲಾಟೆ ಮಾಡುತ್ತಾರೆ. ಅಕಸ್ಮಾತ್ ಪೋಷಕರ ಪ್ರಾಣ ಹೋದಾಗ, ಅವರಿಲ್ಲದೇ ಬದುಕುವ ಜೀವನ ಮಕ್ಕಳಿಗೆ ನರಕ ಎನ್ನಿಸುತ್ತೆ. ಧೈರ್ಯ ಇರುವುದಿಲ್ಲ, ಪ್ರತಿಯೊಂದಕ್ಕೂ ಮಕ್ಕಳಿಗೆ ನಾವಿದ್ದೇವೆ feel free, ಅಂತ ಹೇಳಿ ಹೇಳಿ ಅವಲಂಬಿತರನ್ನಾಗಿ ಮಾಡಿರಿವುದು. ಸ್ವಾರ್ಥವಾಗಿ ಮನೆಗಳಲ್ಲಿ ಕೂಡಾಕಿಕೊಂಡು ಬೆಳೆಸಿರುವ ಪ್ರಭಾವ ನಾಳೆ ಆಚೆ ಹೋದರೆ ಅವಮಾನಗಳನ್ನು ಎದುರಿಸುವ ಶಕ್ತಿ ಇರುವುದಿಲ್ಲ, ಯಾವಾಗ ಶಕ್ತಿ ಇರುವುದಿಲ್ಲವೋ ಅಂದು ಸಾಯಬೇಕೆನ್ನುವ ಮನಸ್ಸುಸ್ಥಿತಿ ಉಂಟಾಗುತ್ತೆ.
ಮತ್ತೊಂದು, ಅಕ್ಕ ಪಕ್ಕದ ಮನೆಗಳ ಅತ್ತಿರ ಅಥವಾ ರಸ್ತೆಬದಿಗಳಲ್ಲಿ ಇರುವ ಗಿಡ ಮರಗಳನ್ನು ಕಡಿಯುತ್ತಿದ್ದರೆ, ಮೂಖ ಪ್ರೇಕ್ಷಕರ ರೀತಿ ನೋಡಿಯೂ ಸುಮ್ಮನ್ನಿರುವುದು. ಮರಗಳನ್ನು ಕಟಾವು ಮಾಡುವುದರ ಮೂಲಕ ನೀವು ಕಷ್ಟ ಪಟ್ಟು ದುಡಿದು ಜೀವನಕೊಡಲು ಮುಂದಾದ ಮಕ್ಕಳಿಗೆ ಶುದ್ಧ ಗಾಳಿ ನೀಡಲು ನಿಮ್ಮ ಕೈಯಲ್ಲಿ ಆಗುತ್ತಿಲ್ಲ, ಕಲುಷಿತ ಗಾಳಿ ಅಂದರೆ ಹೊಗೆ, ದೂಳು ಮುಂತಾದವುಗಳನ್ನು ಉಸಿರಾಡಿ, ಆಸ್ತಾಮ ಹಾಗೂ ಹೃದಯ ಸಂಬಂದಿ ಕಾಯಿಲೆಗಳಿಗೆ ಪೋಷಕರೇ ಕಾರಣವಾಗುತ್ತಿರುವುದು ವಿಪರ್ಯಾಸ. ಕಷ್ಟ ಪಟ್ಟು ದುಡಿಯುವುದರಲ್ಲಿ ಅರ್ಥ ಇಲ್ಲ. ಕನಿಷ್ಠ ಪಕ್ಷ ನಿಮ್ಮ ಮಕ್ಕಳು ಚೆನ್ನಾಗಿಬೇಕೆಂದು ಭಯಸುವ ಪೋಷಕರು, ಗಿಡಮರಗಳನ್ನು ಬೆಳೆಸಲು ಅವಕಾಶ ಇಲ್ಲದಿದ್ದರೆ ಮನೆಯಲ್ಲೇ ಬೆಳೆಯುವ ಗಿಡಗಳನ್ನು ಬೆಳೆಸಿ ನಿಮ್ಮ ಮಕ್ಕಳಿಗೆ ಶುದ್ಧ ಗಾಳಿ ನೀಡುವುದು. ಟೆರೇಸ್ ಗಾರ್ಡನ್ ಮಾಡಿ ಮನೆಗೆ ಬೇಕಾಗಿರುವ ತರಕಾರಿ, ಸೊಪ್ಪುಗಳನ್ನು ರಸಾಯನಿಕ ಗೊಬ್ಬರಗಳು ಹಾಕದೆ, kitchen ವೇಸ್ಟ್ ಮೂಲಕ ಗೊಬ್ಬರ ತಯಾರು ಮಾಡಿ, ತರಕಾರಿಗಳ ಉತ್ಪಾದನೆ ಮಾಡಿಕೊಂಡು ತಿನ್ನುವುದರಿಂದ ಎಷ್ಟೋ ಕಾಯಿಲೆಗಳನ್ನು ನಿಯಂತ್ರಿಸಬಹುದು. ಎಷ್ಟು ಪೋಷಕರು ಮಾಡುತ್ತಿದ್ದಾರೆ?
ಸ್ಟೇಟಸ್ ಎನ್ನುವ ಹೆಸರಲ್ಲಿ ಮಕ್ಕಳ ಕಯ್ಯಿಗೆ ಮೊಬೈಲ್ ಕೊಟ್ಟು ರೇಡಿಯೇಷನ್ ಮೂಲಕ ಮಕ್ಕಳ ಮೆದುಳು ನಾಶ, ಕಣ್ಣು ದೃಷ್ಟಿ ನಾಶ
ಮಾಡುತ್ತಿರುವ ಪೋಷಕರು ನಿಜವಾದ ಮಕ್ಕಳ ಶತ್ರುಗಳಲ್ಲವೇ?
ದಯವಿಟ್ಟು ಎಲ್ಲವನ್ನೂ ಯೋಚಿಸಿ, ಮಕ್ಕಳ ಭವಿಷ್ಯಯಕ್ಕೆ ನಿಜವಾಗಿಯೂ ಬೇಕಾಗಿರುವುದು ಯಾವುದು ಎಂದು ಯೋಚಿಸಿ ಸೂಕ್ತವಾದದ್ದು ಮಾತ್ರ ಕೊಡಿ ಇಲ್ಲವಾದರೆ, ಪೋಷಕರೇ ನಿಜವಾದ ಶತ್ರುಗಳಾಗುತ್ತಾರೆ ಮಕ್ಕಳ ಭವಿಷ್ಯಕ್ಕೆ. ಮೌಲ್ಯಗಳನ್ನ ಕಳುಹಿಸಿ, ಪೋಷಕರು ಸರಿ ದಾರಿ ತೋರಿಸುವ ಸೂಚಕರು ಆಗಬೇಕೇ ಹೊರತು, ತಪ್ಪು ದಾರಿ ತೋರಿಸುವವರು ಆಗಬಾರದು.
ಒಂದು ಮನುಷ್ಯ ಬದುಕುವುದಿಕ್ಕೆ 7 ದೊಡ್ಡ ಗಾತ್ರದ ಮರಗಳ ಆಮ್ಲಜನಕ ಬೇಕು. ಒಂದು ಮರವನ್ನು ಕಟಾವು ಮಾಡಿದರೆ ಒಬ್ಬರಿಗೆ 7 ಮರಗಳನ್ನು ಬೆಳೆಸಬೇಕು. ಆದರೆ 100 ಮರಗಳು ಕಟಾವು ಮಾಡಿದರೂ ಒಂದು ಮರ ಬೆಳೆಸುವುದು ಮಾಡುತ್ತಿಲ್ಲ ಜನರು. ಮರಗಳು ಹೆಚ್ಚಾದಷ್ಟು ಆಚೆ ಇರುವ ವಿಷದ ಗಾಳಿ ಕಡಿಮೆಯಾಗುತ್ತೆ ಯಾಕೆ ಅಂದ್ರೆ ಮರಗಳು ಕೆಟ್ಟಗಾಳಿಯನ್ನ ಹಿರಿಕೊಂಡು, ಶುದ್ಧಗಾಳಿಯನ್ನು ನಮಗೆ ಉಸಿರಾಡಲು ನಮಗೆ ನೀಡುತ್ತೆ.
ಪ್ರಕೃತಿನ ನಾಶ ಮಾಡಿದರೆ ನಮ್ಮ ವಿನಾಶ ಕಟ್ಟಿಟ್ಟ ಬುದ್ದಿ.
ಹೆಚ್ಚು ಮರಗಳನ್ನು ಬೆಳೆಸಿ, ಉಳಿಸಿ. ಮಕ್ಕಳ ಪಾಲಿನ ಹಿತೈಷಿಗಳಾಗಿ ಅಂತ ವಿನಂತಿಸಿಕೊಳ್ಳುತ್ತೇನೆ.