Live Stream

[ytplayer id=’22727′]

| Latest Version 8.0.1 |

Viral News

ಸೇಡು ತೀರಿಸಿಕೊಳ್ಳುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತ ವಲ್ಲ ಪಕ್ಷಿಗಳಿಗೂ ಇರುತ್ತೆ

ಸೇಡು ತೀರಿಸಿಕೊಳ್ಳುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತ ವಲ್ಲ ಪಕ್ಷಿಗಳಿಗೂ ಇರುತ್ತೆ

    1. ಸೇಡು ತೀರಿಸಿಕೊಳ್ಳುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತ ವಲ್ಲ. ಹೊಸ ಅಧ್ಯಯನವೊಂದರ ಪ್ರಕಾರ, ಕಾಗೆಗಳು ಸಹ ತಮಗೆ ಹಾನಿ ಮಾಡಿದವರನ್ನು ನೆನಪಿಟ್ಟುಕೊಂಡು ಸೇಡು ತೀರಿಸಿಕೊಳ್ಳುತ್ತವೆ. ಅಧ್ಯಯ ನದ ಪ್ರಕಾರ, ಕಾಗೆಗಳು 17 ವರ್ಷಗಳ ವರೆಗೆ ವ್ಯಕ್ತಿಯೊಬ್ಬರನ್ನು ನೆನಪಿಟ್ಟು ಕೊಂಡು ಸೇಡು ತೀರಿಸಿಕೊಳ್ಳಲು  ಪ್ರಯತ್ನಿಸಬಹುದು. ಈ ಅಂಶ ವಾಷಿಂಗ್ಟನ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿ ಪ್ರೊಫೆಸರ್ ಜಾನ್ ಮಾರ್ಜುಫ್ ನಡೆಸಿದ ಸಂಶೋ ಧನೆಯಿಂದ ಬೆಳಕಿಗೆ ಬಂದಿದೆ. 2006 ರಲ್ಲಿ, ಅವರು ಕಾಗೆಗಳು ಸೇಡು ತೀರಿಸಿಕೊಳ್ಳುತ್ತವೆಯೇ ಎಂಬು ದರ ಬಗ್ಗೆ ಪ್ರಯೋಗವನ್ನು ಆರಂಭಿಸಿ ದರು. ಪ್ರಯೋಗಕ್ಕಾಗಿ, ಅವರು ರಾಕ್ಷಸ ಮುಖವಾಡವನ್ನು ಧರಿಸಿ ಏಳು ಕಾಗೆಗಳನ್ನು ಬಲೆಗೆ ಹಾಕಿದರು. ನಂತರ, ಅವುಗಳ ಗುರುತಿಗಾಗಿ ಅವು ಗಳ ರೆಕ್ಕೆಗಳ ಮೇಲೆ ಗುರುತು ಹಾಕಿ, ಯಾವುದೇ ಗಾಯಗಳಿಲ್ಲದೆ ಬಿಟ್ಟರು. ಆದರೆ, ನಂತರ ಆ ಏಳು ಕಾಗೆಗಳು ತಮ್ಮನ್ನು ಹಿಡಿದ ವ್ಯಕ್ತಿಯನ್ನು ಹುಡುಕುತ್ತಲೇ ಇದ್ದವು. ಪ್ರೊಫೆಸರ್ ಜಾನ್ ಮಾರ್ಜುಫ್ ಮುಖವಾಡ ಧರಿಸಿ ಕ್ಯಾಂಪಸ್‌ಗೆ ಬಂದಾಗಲೆಲ್ಲಾ, ಕಾಗೆಗಳು ಅವರ ಮೇಲೆ ದಾಳಿ ಮಾಡುತ್ತಿದ್ದವು. ಪ್ರೊಫೆಸರ್‌ಗೆ ಆಶ್ಚರ್ಯವಾದ ವಿಷಯವೆಂದರೆ, ಈ ದಾಳಿಗಳಲ್ಲಿ ಆ ಏಳು ಕಾಗೆಗಳು ಮಾತ್ರ ಭಾಗಿಯಾಗಿ ರಲಿಲ್ಲ. ಬದಲಾಗಿ, ಅಲ್ಲಿ ಇದ್ದ ಇತರ ಕಾಗೆಗಳು ಸಹ ಈ ದಾಳಿಗಳಲ್ಲಿ ಭಾಗಿ ಯಾಗಿದ್ದವು. ಕಾಗೆಗಳ ಈ ದಾಳಿ ಸುಮಾರು ಏಳು ವರ್ಷಗಳ ಕಾಲ ಮುಂದುವರೆಯಿತು. 2013 ರ ನಂತರ, ಕಾಗೆಗಳ ದಾಳಿಗಳು ಕ್ರಮೇಣ ಕಡಿಮೆ ಯಾಗಲಾರಂಭಿಸಿದವು. ಕೊನೆಗೆ, ತಮ್ಮ ಪ್ರಯೋಗವನ್ನು ಆರಂಭಿಸಿ 17 ವರ್ಷ ಗಳ ನಂತರ, ಕಳೆದ ವರ್ಷ ಸೆಪ್ಟೆಂ ಬರ್‌ನಲ್ಲಿ, ಪ್ರೊಫೆಸರ್ ಜಾನ್ ಮಾರ್ಜುಫ್ ಮತ್ತೆ ಮುಖವಾಡ ಧರಿಸಿ ಹೊರಗೆ ಹೋದರು. ಪ್ರಯೋಗ ಆರಂ ಭವಾದ ನಂತರ ಮೊದಲ ಬಾರಿಗೆ ಕಾಗೆಗಳು ಅವರ ಮೇಲೆ ದಾಳಿ ಮಾಡಲಿಲ್ಲ. ಪ್ರೊಫೆಸರ್ ಜಾನ್ ಮಾರ್ಜುನ್ ಕಳೆದ 17 ವರ್ಷಗಳಿಂದ ಕಾಗೆಗಳ ಮೇಲೆ ನಡೆಸಿದ ತಮ್ಮ ಪ್ರಯೋಗದ ಸಂಶೋಧನಾ ಪ್ರಬಂಧವನ್ನು ಪ್ರಕಟಿ ಸಲು ಸಿದ್ಧತೆ ನಡೆಸುತ್ತಿದ್ದಾರೆ. ತಮ್ಮ 17 ವರ್ಷಗಳ ಅಧ್ಯಯನದ ಮೂಲಕ, ಮಾರ್ಜುಫ್ ಕಾಗೆಗಳಲ್ಲಿ ಸಸ್ತನಿಗಳ ಅಮಿಗ್ದಾಲಾಕ್ಕೆ ಸಮಾನವಾದ ಮೆದುಳಿನ ಭಾಗವಿದೆ ಎಂದು ಕಂಡು ಹಿಡಿದರು. ಇದು ಭಾವನೆಗಳನ್ನು ಪ್ರಕ್ರಿಯೆ ಗೊಳಿಸಲು ಕಾರಣವಾದ ಮೆದುಳಿನ ಭಾಗ. ಅವರ ಪ್ರಕಾರ, ಕಾಗೆಗಳು ಮಾನವ ನಡವಳಿಕೆಯನ್ನು ಸೂಕ್ಷ್ಮ ವಾಗಿ ಗಮನಿಸಬಲ್ಲವು ಮತ್ತು ಮಾನವ ಮುಖಗಳನ್ನು ಸಹ ಗುರುತಿ ಸಬಲ್ಲವು. ಇದರಿಂದಾಗಿ ಕಾಗೆಗಳು ವ್ಯಕ್ತಿಯೊಬ್ಬರನ್ನು ಗುರುತಿಸಬಲ್ಲವು ಮತ್ತು ತಮಗೆ ಅಪಾಯವೆನಿಸಿದರೆ ಅವರನ್ನು ನೆನಪಿಟ್ಟುಕೊಳ್ಳಬಲ್ಲವು. ಅವರು ಮುಂದೆ ಹೇಳುವಂತೆ, ಕಾಗೆಗಳು ಈ ದ್ವೇಷವನ್ನು ತಮ್ಮ ಗುಂಪಿನ ಇತರ ಸದಸ್ಯರಿಗೆ ತಿಳಿಸಬಲ್ಲವು ಮತ್ತು ಹೀಗೆ ಸಾಮೂಹಿಕ ದಾಳಿ ನಡೆಸಬಲ್ಲವು.


WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";